ನಾಕನೇ spatial ಆಯಾಮ ಸಮಯವೇ ಆಗಿದೆ! ಐನ್ ಸ್ಟೈನ್ ತಿಎರಿಯಂತೆ ಸ್ಪೇಸ್-ಟೈಮ್ ಎರಡೂ ಬಿಡಿಸಲಾಗದಂತದು, ಇದು ಅರ್ಥವಾಗುವಂತದೇ, ಯಾಕಂದರೆ ನಾವು ಒಂದು, ಎರಡು ಮತ್ತು ಮೂರನೆ ಆಯಾಮಗಳನ್ನು ಊಹೆ ಮಾಡಿಕೊಳ್ಳುತ್ತೇವೆ ಹೊರತು, ಆ ರೀತಿ ಬರೀ ಒಂದು ಗೆರೆ ಆಯಾಮವಾಗಲಿ, ಎರಡು ಆಯಾಮದ ಪ್ಲೇನ್ ಆಗಲಿ ಇಲ್ಲ. ನನ್ನ ಮುಂಚಿನ ಬರಹ, "ವಿಸ್ಮಯಯುತ ನಾಕನೇ ಆಯಾಮ"(http://obbakannadiga.blogspot.in/2012/05/blog-post.html) ದಲ್ಲಿ ನಾಕನೇ ಆಯಾಮದ ಗುಣಗಳಿಗೆ ಹೇಗೆ ಸಮಯ ಹೊಂದಿಕೆಯಾಗುತ್ತದೆ ನೋಡೋಣ.
೧) "ಒಂದು ಸಾಲಿಡ್ ಚೆಂಡಿನ ಹೂರಣದೊಳಗೆ ಮತ್ತೊಂದು ಸಾಲಿಡ್ ಆದ, ಕ್ಯೂಬ್ ಒಂದನ್ನು ಹುದುಗಿಸಲಾಗಿದೆ ಅಂದುಕೊಳ್ಳಿ, ಹೈಪಸ್ಪೇಸ್‍ನಿಂದ ನೋಡಿದಾಗ ಚೆಂಡು, ಅದರೊಳಗಿನ ಹೂರಣ, ಮತ್ತು ಅದರಲ್ಲಿ ಹುದುಗಿಸಿದ ಕ್ಯೂಬ್ ಎಲ್ಲವೂ ಒಟ್ಟಿಗೆ ತೋರುತ್ತದೆ. ಇದು ಹೇಗೆಂದರೆ, ಸಮತಲದ ಮೇಲೊಂದು, squareನ್ನು ಚಿತ್ರಿಸಲಾಗಿದೆ ಅನ್ನಿ. ಸಮತಲದ ಮೇಲಿಂದ ನೋಡಿದಾಗ, ಅದರ ದಂಡೆಗಳು ಅಂದರೆ edges ಮಾತ್ರ ಕಾಣುತ್ತದೆ. ಅದೇ ಮೂರನೇ ಆಯಾಮದ ಎತ್ತರದಿಂದ ನೋಡಿದಾಗ ಆ ಸರ್ಕಲ್ ನ ಒಳಭಾಗ, ಅದರಲ್ಲಿ ತುಂಬಲಾದ ಬಣ್ಣ ಎಲ್ಲವೂ ತೋರುತ್ತದೆ. ಅದೇ ರೀತಿ ಮೂರನೇ ಆಯಾಮದ ವಸ್ತುಗಳ ಒಳ ಮತ್ತು ಹೊರ ಭಾಗಗಳು ನಾಲ್ಕನೇ ಆಯಾಮದಿಂದ ಒಟ್ಟಿಗೇ ತೋರುತ್ತವೆ"
ಯಾವ ಸಮಯವನ್ನು ನಾವು ಈ ಕ್ಷಣ ಅಂತ ಅಂದುಕೊಳ್ಳುತ್ತೇವೆ ಅನ್ನುವದರ ಮೇಲೆ ಇದು ಅವಲಂಬಿತವಾಗಿದೆ. ಒಬ್ಬ ಮನುಷ್ಯನ ಹುಟ್ಟಿನಿಂದ ಎಂಬತ್ತನೇ ವಯಸ್ಸಿನವರೆಗಿನ ಕಾಲವನ್ನು ನಾವು ಈ ಕ್ಷಣ ಅಂತ ನೋಡಿದಲ್ಲಿ ಆ ವೆಕ್ತಿಯ ಬಾಲ್ಯ, ಯೌವ್ವನ ಮತ್ತು ಮುಪ್ಪು ಒಟ್ಟಿಗೆ ತೋರುತ್ತವೆ ಅಲ್ಲವೇ! ಇದು ಬೆಂಗಳೂರನ್ನೂ ಬೆಳಗಾವಿಯನ್ನು ಒಟ್ಟಿಗೆ ನೋಡಿದಂತೆ, ಅಂದರೆ mapನಲ್ಲಿ. ಸಮಯದ ಮ್ಯಾಪ್ನಲ್ಲಿ ನೋಡಿದಾಗ, ಅಂದರೆ ಒಂದು ವಸ್ತು ಮಾಡಿದಂದಿನಿಂದ ನೋಡಿದಾಗ ಅದರ ಒಳಗಿನ ಕ್ಯೂಬ್ ಮತ್ತು ಹೂರಣ ಒಟ್ಟಿಗೆ ತೋರುತ್ತದೆ!!
೨) "ತುದಿಯೊಂದಕ್ಕೆ ಬಾಣದ ಗುರುತಿರುವ ಸ್ಪ್ರಿಂಗ್ ಒಂದನ್ನು ತೆಗೆದುಕೊಳ್ಳಿ. ಸ್ಪ್ರಿಂಗ್‍ನ ತಿರುಚಿನ ದಿಕ್ಕನ್ನು ಬದಲಾಯಿಸಲು ಅದರ ಬಾಣವನ್ನು ಕಿತ್ತು, ಕೆಳ ತುದಿಗೆ ಅಂಟಿಸಬೇಕು ಮತ್ತು ಮೇಲಿಂದ ಕೆಳಗೆ ಬರಬೇಕು. ಆದರೆ ನಾಲ್ಕನೇ ಆಯಾಮದಲ್ಲಿ ಸ್ಪೇಸನ್ನು flip ಮಾಡಿದರೆ ಸಾಕು, ಸ್ಪ್ರಿಂಗನ್ನು ಮುಟ್ಟದೆಯೇ ಅದರ ತಿರುಚು ದಿಕ್ಕನ್ನು ಬದಲಾಯಿಸಿ ಬಿಡಬಹುದು"
ಹೇಗೆ ಮೂರನೇ ಆಯಾಮದಲ್ಲಿ ಒಂದು ಸಮತಳದ reference ತೆಗೆದುಕೊಂಡು, ಅದರ ಕೆಳಗಿನದು ರುಣ ಅಂತ ಅಂದುಕೊಳ್ಳುತ್ತೇವೋ ಅದೇ ಬಗೆ, ಒಂದು ಸಮಯವನ್ನು negative ಆಗಿ ಅಳೆಯುವದೆಂದರೆ ವೀಡಿಯೊವನ್ನು ರಿವರ್ಸ್ ಪ್ಲೇ ಮಾಡಿದಂತೆ. ಅಲ್ಲದೇ ನೋಡುವ ದಿಕ್ಕು ಕೂಡ ತಲೆಕೆಳಗು, ಆಗ ಸ್ಪಿಂಗ್ ನ ತಿರುಚು ದಿಕ್ಕು ಬದಲಾಗುವದಲ್ಲದೆ ಬಾಣದ ಗುರುತು ಕೂಡ ಇನ್ನೊಂದು ತುದಿಗೆ ತೋರುತ್ತದೆ.
೩) 4ಡಿಯ ಹೈಪರ್‌ಚೆಂಡು 3ಡಿ ಸ್ಪೇಸ್‍ನಲ್ಲಿ ಹಾಯ್ದು ಹೋಗುವಾಗ ಹೇಗೆ ತೋರುತ್ತದೆಯೆಂದರೆ, ಶೂನ್ಯದಿಂದ ಚೆಂಡೊಂದು ಹುಟ್ಟಿ, ಗಾತ್ರದಲ್ಲಿ ದೊಡ್ಡದಾಗುತ್ತ, ಒಂದು ಗಾತ್ರ ತಲುಪಿದ ಮೇಲೆ, ಮತ್ತೆ ಚಿಕ್ಕದಾಗುತ್ತ ಹೋಗಿ, ಮಾಯವಾಗಿ ಬಿಡುತ್ತದೆ
ಇದನ್ನು ಈಗಿನ ಮಟ್ಟಿಗೆ ವಿವರಿಸುವದು ಕಷ್ಟ, ನಿಮಗೆ ಗೊತಿದ್ದರೆ ಚರ್ಚೆಗೆ ಸಿದ್ದ!
ನಾವು ನಮ್ಮ ಒಂದು ಕ್ಷಣದ ನೋಟದಿಂದ, ಎಷ್ಟು ಬೇಗ ನಮ್ಮ ಸುತ್ತಲ ಪರಿಸರವನ್ನು ಅರಿಯುತ್ತೇವೆ ಎಂಬುದು, ಭೂಮಿಯ ೩೬೫ ದಿನಗಳ ವರ್ಷ ಮತ್ತು ೨೪ ಗಂಟೆಗಳ ತನ್ನ ಸುತ್ತ ಸುತ್ತುವ ವೇಗದ ಮೇಲೆ ನಿರ್ಧರಿತವಾಗಿದೆ! ದೂರದ ಭೂಮಿಯನ್ನು ಹೋಲುವ ಗ್ರಹದ ಮೇಲಿನ ಜೀವಿಗಳ ಗ್ರಹಿಕೆಯ ವೇಗ ಅದು ಸುತ್ತುವ ವೇಗದ ಮೇಲೆ ನಿರ್ಧರಿತವಾಗಿರುತ್ತದೆ. ಉದಾಹರಣೆಗೆ, ಅದರ ೧ ವರ್ಷ ನಮ್ಮ ೨೫ ವರ್ಷ ಮತ್ತು ೧ ದಿನ ನಮ್ಮ ೨೫-೩೦ ದಿನಗಳಾಗಿದ್ದಲ್ಲಿ, ಅಲ್ಲಿನ ಜೀವಿಗಳ ಚಲನ-ವಲನ ನಮಗೆ ಸುಪರ್ ಸ್ಲೋ ಆಗಿ ತೋರುತ್ತದೆ! ಆಮೆಯ ವೇಗ ನಮಗೆ ನಿಧಾನ, ಆದರೆ ಆಮೆಗೆ ನಮ್ಮ ವೇಗ ಫಾಸ್ಟ್! ನೊಣಕ್ಕೆ ನಮ್ಮ ವೇಗ ತುಂಬ ಸ್ಲೋ!!
ಈ ಕ್ಷಣ ಎಂಬುದು RAM(Random Access Memory) ನ ಮಿತಿಯ ಮೇಲೆ ನಿಂತಿದೆ, ನಾವು ನೋಡುವ 3D world ಕೂಡ ಚಿತ್ರಗಳನ್ನು ಸೆರೆ ಹಿಡಿದು, process ಮಾಡಿ ಅರ್ಥ ಮಾಡಿಕೊಳ್ಳುವದೇ ಆಗಿದೆ! ಉದಾಹರಣೆಗೆ ನಮ್ಮ ನೋಟ ಒಂದು straw ನಲ್ಲಿ ಕಾಣುವ ಚಿತ್ರಕ್ಕಷ್ಟೇ ಸೀಮಿತವಾಗಿತ್ತು ಅಂದುಕೊಳ್ಳಿ, ಆಗ ನಮ್ಮ ಎದುರಿನ ಒಂದು ವಸ್ತುವನ್ನು ನೋಡಲು, ಮೇಲೆ, ಕೆಳಗೆ ಎಲ್ಲ ಕಡೆ ನೋಡಿ, ಆ ಚಿತ್ರಗಳನ್ನೆಲ್ಲ ನೆನಪಿಟ್ಟು, ಒಂದು ವಸ್ತುವನ್ನು ಗ್ರಹಿಸಬೇಕಿತ್ತು. ಆದರೆ ಅದ್ರುಷ್ಟವಶಾತ್ ನಮ್ಮ ನೋಟ ವಿಶಾಲವಾಗಿರುವದರಿಂದ ನಮ್ಮ ಎದುರಿನ ವಸ್ತುಗಳನ್ನು ನೋಡಿದ ಕೊಡಲೇ ಗ್ರಹಿಸುತ್ತೇವೆ. ಆ ಗ್ರಹಿಕೆ ಎಷ್ಟು ಬೇಗ ಆಗಿ ಹೋಗಿರುತ್ತದೆ ಅಂದರೆ, ಅದು ನಮಗೆ ಕ್ಷಣ ಮಾತ್ರ ಅನಿಸುತ್ತದೆ. ಅದೇ ರೀತಿ ನಮ್ಮ RAM ಇನ್ನೂ ಹೆಚ್ಚಿಗೆ ಇದ್ದಿದ್ದರೆ ಇಡೀ ದಿನದ ಚಿತ್ರಣವನ್ನು ಒಟ್ಟಿಗೆ ಗ್ರಹಿಸಿ ಅಂದಿನ ಘಟನೆಗಳ ಒಟ್ಟು ಹೂರಣವನ್ನು ಅರ್ಥ ಮಾಡಿಕೊಳ್ಳಬಹುದು, ಅಸ್ಟೇ ಅಲ್ಲ ಇಡೀ ದಿನ ಸಾಗಿದ್ದರೂ ಅದು ಕ್ಷಣ ಮಾತ್ರವಾಗಿ ತೋರುತ್ತದೆ!
ಮುಂದುವರೆಯಲಿದೆ....