Wednesday, October 28, 2009

ಕನ್ನಡಕ್ಕೆ ಅಪಾಯಕಾರಿಯಾಗುತ್ತಿರುವ ತೆಲುಗು ಸಿನಿಮಾಗಳು!!

ತೆಲುಗು ಭಾಷೆ ಕನ್ನಡಕ್ಕೆ, ಇಲ್ಲವೇ ಅದನ್ನೇ ಇನ್ನೊಂದು ಬಗೆಯಲ್ಲಿ ಹೇಳುವದಾದರೆ, ತೆಲುಗುರು ಕನ್ನಡಿಗರಿಗೆ ಹೆಚ್ಚು ಹತ್ತಿರದವರಾಗಿರುವ(ಬೇರೆ ತೆಂಕಣ ನುಡಿಗಳ ಹೋಲಿಕೆಯಲ್ಲಿ) ನುಡಿಗರು. ಆದರೆ ಇತ್ತೀಚೆಗೆ ಕನ್ನಡಿಗರಲ್ಲಿ ತೆಲುಗಿನ ಬಗೆಗಿನ ಅನುರಾಗ, ಒಂದು ಬಗೆಯ ಒಲವು ಬೆಳೆದಂತೆ ತೋರುವದಲ್ಲದೇ, ತೆಲುಗರ ದಬ್ಬಾಳಿಕೆಯೂ ಸೇರಿ, ಕರ್ನಾಡಿನಲ್ಲೇ ಕನ್ನಡ ಬಡವಾಗುತ್ತಿರುವಂತೆ ತೋರುತ್ತಿದೆ.
ಇದಕ್ಕೆ ಕಾರಣಗಳು:
೧) ಜನ ಕನ್ನಡ ಬಿಟ್ಟು ಬೇರೆ ನುಡಿಯ ಸಿನಿಮಾ ನೋಡದೇ ಇರುವ ಕಡೆಗಳಲ್ಲೆಲ್ಲಾ, ತೆಲುಗು ಸಿನಿಮಾಗಳು ತೆರೆ ಕಾಣುತ್ತಿವೆ. ಹುಬ್ಬಳ್ಳಿ, ಬೆಳಗಾವಿ, ಜಮಖಂಡಿಯಂತ ಕಡೆ ಮೊದಲೆಲ್ಲ ಅಂದರೆ ಬರೀ ೩-೪ ವರುಷಗಳ ಹಿಂದಸ್ಟೇ, ಕನ್ನಡ ಬಿಟ್ಟರೆ ಹಿಂದಿ ಸಿನಿಮಾಗಳಸ್ಟೇ ತೆರೆ ಕಾಣುತ್ತಿದ್ದುದು, ಈಗ ಅಲ್ಲೆಲ್ಲ ತೆಲುಗು ಸಿನಿಮಾಗಳು ತೆರೆ ಕಾಣುತ್ತಿವೆ.
೨) ತೆಲುಗಿನ ಕನ್ನಡ News ಚಾನೆಲ್ TV9, ಈಗಂತೂ ಇನ್ನಿಲ್ಲದಂತೆ ಒತ್ತಿ ಒತ್ತಿ, ತೆಲುಗು ಸಿನಿಮಾಗಳ ಬಗೆಗೆ, ಹೆಜ್ಜೆ ಹೆಜ್ಜೆಗೂ ಮಾಹಿತಿ ಕೊಡತೊಡಗಿದ್ದಾರೆ. ಅಲ್ಲಿನ ಯಾವುದೋ ಜೂನಿಯರ್ ನಟ ಹೂಂಸು ಬಿಟ್ಟರೂ ಕರ್ನಾಟಕದ ನಂಬರ್ ೧ ಸುದ್ದಿ ಚಾನೆಲ್ ಅನ್ನಿಸಿಕೊಂಡಿರುವ TV9 ನಲ್ಲಿ ದೊಡ್ಡ ಸುದ್ದಿ. ಕನ್ನಡದ ದೊಡ್ಡ ಬ್ಯಾನರ್ ಸಿನಿಮಾ ಸುದ್ದಿನೂ ಅದರ ಮುಂದೆ ಸಪ್ಪೆ ಸಪ್ಪೆ!!!! ಇದನ್ನು ಕೇಳುವವರೇ ಇಲ್ಲವೇನೋ :-(
೩) ಕರ್ನಾಟಕದ ರಾಜಕೀಯದಲ್ಲಿ ತೆಲುಗರ ಕೈ ದೊಡ್ಡದಾಗಿದೆ. ನಂದಿನಿ ಹಾಲಿನ ಪ್ಯಾಕೆಟ್ ಮೇಲೆ ಕ್ರಿಷ್ನದೇವರಾಯನ ಚಿತ್ರವನ್ನು ಮುದ್ರಿಸುವ ನಿರ್ಧಾರ ಒಂದು ದೊಡ್ಡ ಉದಾಹರಣೆ. ಕಾರಣ, ಕ್ರಿಷ್ನದೇವರಾಯ ಕನ್ನಡ, ತೆಲುಗು ಎರಡಕ್ಕೂ ಪ್ರಾಧನ್ಯತೆ ಕೊಟ್ಟಿದ್ದಕ್ಕೆ. ಆಗ ಕರ್ನಾಟಕ, AP ಒಂದೇ ಆಗಿತ್ತು, ಈಗ ಆಂದ್ರಗೆ ತೆಲುಗು ಇದೆ, ಕರ್ನಾಟಕದಲ್ಲಿ ಕನ್ನಡಕ್ಕೇ ಹಕ್ಕಿರುವದು, ಇದನ್ನು ಕಾಯ್ದಿರಿಸಿಕೊಳ್ಳುವ ಹೊಣೆ ಕನ್ನಡಿಗರದ್ದು. ರಾಜಕೀಯದ ವಿಚಾರದಲ್ಲಿ "ಕನ್ನಡ ಮಾತಾಡುವ ಪರ ಭಾಷಿಕ"ರನ್ನು ಗುರುತಿಸಿ, ಅವರನ್ನು ಎಲ್ಲಿಡಬೇಕೋ ಅಲ್ಲಿಡುವ ಹೊಣೆ ಕನ್ನಡಿಗರದ್ದು.

ಇದಕ್ಕೆ ಪರಿಹಾರಗಳು:
೧) ಕನ್ನಡಿಗರು ತೆಲುಗು/ತಮಿಳು ಸಿನಿಮಾಗಳನ್ನು ಸಿನಿಮಾಮಂದಿರಗಳಲ್ಲಿ ನೋಡುವದನ್ನು ಬಿಡಬೇಕು. ಕನ್ನಡ ಸಿನಿಮಾಗಳನ್ನು ಸಿನಿಮಾಮಂದಿರಗಳಲ್ಲಿ ನೋಡಿ, ಒಳ್ಳೆಯ ಕನ್ನಡ ಸಿನಿಮಾಗಳಿಗೆ ಬೆಂಬಲ ನೀಡಬೇಕು.
೨) TV9 ಗೆ ಕೊಟ್ಟಿರುವ ಹಕ್ಕನ್ನು ಸರಕಾರ ಹಿಂಪಡೆಯಬೇಕು. ತೆಲುಗು ಸಿನಿಮಾಗಳ ಬಗ್ಗೆ ಮಾಹಿತಿ ತುಂಬೋದನ್ನು ಬಿಡದೇ ಇದ್ದಲ್ಲಿ TV9 (ನ್ನು ಕರ್ನಾಟಕದಿಂದ ಹೊರಹಾಕಿ) ಗೆ ಕೊಟ್ಟಿರುವ ಹಕ್ಕನ್ನು ಸರಕಾರ ಮರುಪರಿಶೀಲಿಸಿ, ಹಕ್ಕನ್ನು ಹಿಂಪಡೆಯಬೇಕು.
೩) ಕನ್ನಡ ಸ್ಪಸ್ಟವಾಗಿ ಮಾತಾಡಿ, ನಡೆ, ನುಡಿ ಮತ್ತು ಮನಸ್ಸಿನಿಂದ ಕನ್ನಡತನವಿರದ ನಾಯಕರನ್ನು ಆರಿಸಬೇಡಿ. ಅಂತವರಿಗೆ ಕನ್ನಡದ ಬಗೆಗೆ ಒಲವಾಗಲಿ, ಕನ್ನಡದ ಕಲೆ, ಸಾಹಿತ್ಯ ಭಾಂಡಾರಗಳ ಅರಿವಾಗಲಿ ಇರುವದಿಲ್ಲ. ಅಂತವರನ್ನು ಗುರುತಿಸಿ, ಅವರಿಗೆ ವೋಟು ನಿಡಬೇಡಿ.

ಕರ್ನಾಟಕದಲ್ಲಿ ಕನ್ನಡ ಬೆಳಗಬೇಕು, ಇಲ್ಲಿ ಕನ್ನಡ ದೀಪ ಸದಾ ಬೆಳಗುವಂತೆ ನೋಡಿಕೊಳ್ಳಬೇಕಿರುವರು, ಪ್ರತಿಯೋರ್ವ ಕನ್ನಡಿಗನ ಹೊಣೆ.

4 comments:

AAAA said...

Eegina sthithige thumba samanjasavagide

Anonymous said...

>> ಕನ್ನಡ ಸಿನಿಮಾಗಳನ್ನು ಸಿನಿಮಾಮಂದಿರಗಳಲ್ಲಿ ನೋಡಿ,
ಕಿತ್ತು ಹೋಗಿರೋ ಚಿತ್ರಗಳಿಗೆ ರೂ. ೪೦-೫೦ ಖರ್ಚು ಮಾಡೋಕೆ ಚಾನ್ಸೇ ಇಲ್ಲ!!
>> ಒಳ್ಳೆಯ ಕನ್ನಡ ಸಿನಿಮಾಗಳಿಗೆ ಬೆಂಬಲ ನೀಡಬೇಕು.
ಇದನ್ನ ಒಪ್ಪಿದೆ. ಮನಸಾರೆ ನ PVR ನಲ್ಲಿ ರೂ. ೧೫೦/- ಕೊಟ್ಟು ನೋಡಿಕೊಂಡು ಬಂದೆ.

ಅವೀನ್ said...

Even not related to this article..

After seeing the title I just remembered these two words..

"ಹಾಗಾದರೆ ನೆದರು ಹತ್ತಿ ಬಿಡುತ್ತದೆ"

Just kidding...
Nice article reflects real entities.

Yours
Aveen

anjanaa hegde said...

ನಿಮ್ಮ ಕನ್ನಡ ಅಭಿಮಾನಕ್ಕೆ ನನ್ನ ಅಭಿನಂದನೆ. ಆದರೆ TV9 ಬೈಯಬೇಡಿ please.