Wednesday, September 06, 2006

ಬದುಕೆಂಬ ಬದುಕು

ಬದುಕೆಂಬ ಬದುಕಿದು ಐತಿ ಬಾsಳ ಸಣ್ಣದು
ಅದಕsನೋ ತಮ್ಮಾ ಆರಾsಮಿರೋ ತಿಮ್ಮಾ

ಇವೊತ್ತು ಜೋಳದ ರೊಟ್ಟಿ ಇಲ್ಲಂದರ
ಚಪಾತಿ ತಿಂದ ಆರಾsಮಿರು

ಗೆಳೆಯಾರಾರು ಸಿಗಲಿಲ್ಲಂದರ
ಟಿ.ವಿ. ನೋಡಕೊಂಡ್ ಆರಾsಮಿರು

ಜಿಮ್ಮಿಗೆ ಹೋಗುದಾಗಲಿಲ್ಲಂದರ
ಒಂದೆರಡ ಹೆಜ್ಜಿ ನಡsದ ಆರಾsಮಿರು

MBA ಮಾಡಬೇಕು ಅನ್ನಕೊಂಡಿದ್ದಿ
S/W ನಾಗs ಆರಾsಮಿರು

ಮನಿಗೆ ಹೋಗುದಾಗಲಿಲ್ಲಂದರ
ಪೋನಿನಾಗ ಮಾತಾಡಿ ಆರಾsಮಿರು

ಯಾರನೋ ನೋಡುದು ಆಗಲಿಲ್ಲಂದರ
ಅವರ ದನಿ ಕೇಳಿ ಆರಾsಮಿರು

ನಿನ್ನೆಂಬುದು ಕಳೆದು ಹೋಗೇತಿ
ಒಳ್ಳೆಯದರ ನೆನಪಿನಾsಗ ಆರಾsಮಿರು

ನಾಳೆ ಹೆಂಗೈತೋ ಗೊತ್ತಿಲ್ಲ
ಕನಸಿನಾಗs ಆರಾsಮಿರು

ನಿನ್ನೆ ನಾಳಿ ಚಿಂತಿ ಮರೆತು
ಇಂದಿನದೊಳಗs ಆರಾsಮಿರು

ಬದುಕೆಂಬ ಬದುಕಿದು ಐತಿ ಬಾsಳ ಸಣ್ಣದು
ಅದಕsನೋ ತಮ್ಮಾ ಆರಾsಮಿರೋ ತಿಮ್ಮಾ

2 comments:

Sandeepa said...

ನೀನೆ ಬರ್ದಿದ್ದ ಬಟ್ಟಾ??
ಸಿಕ್ಕಾಪಟ್ಟೆ ಚೆನಾಗಿದ್ದು.. :)

admin said...

thanks ree.