Thursday, September 28, 2006

ಅಪ್ಪಟ ಕನ್ನಡ ನೆಲ 'ಬೆಳಗಾವಿ'

ಎಮ್.ಈ.ಎಸ್ ಎಂಬ ಪಾರಟಿಯವರು ಹಬ್ಬಿಸಲು ನೋಡುತ್ತಿರುವುದೇನೆಂದರೆ ಬೆಳಗಾವಿ ಮೊದಲಿಂದಲು ಮರಾಟಿಗರದು, ಅಲ್ಲಿ ಮೊದಲಿಂದಲೂ ಮರಾಟಿಗರು ನೆಲೆಸಿದ್ದರೆಂದು. ಅಪ್ಪಟ ಸುಳ್ಳು ಹೇಳಿಕೊಂಡು ಮಂದಿಯನ್ನು ನಂಬಿಸಿ, ಅನ್ನೆದಿಂದ ಬೆಳಗಾವಿಯನ್ನು ಮಹಾರಾಸ್‍ಟ‍ರಕ್ಕೆ ಸೇರಿಸಲು ನೋಡುತ್ತಿದ್ದಾರೆ.

http://www.dailypioneer.com/indexn12.asp?main_variable=VOTE_2004&file_name=vote364.txt&counter_img=364

ಮೇಲಿನ ಕೊಂಡಿಯಂತೆ ಬೆಳಗಾವಿಯಿಂದ ಬರೀ ಹತ್ತೇ ಕಿಲೋಮೀಟರ್ ಇರುವ 'ಯಲ್ಲೂರು' ಎಂಬಲ್ಲಿ ಸೇ ೯೫% ಮಂದಿ ಮರಾಟಿಯವರಂತೆ. ಇದಕ್ಕೆ ಕಾರಣ ಮರಾಟಿಗರ ದಬ್ಬಾಳಿಕೆ. ಯಲ್ಲೂರು ಇದು ಅಪ್ಪಟ ಕನ್ನಡ ಊರಿನ ಹೆಸರು, ಅಲ್ಲಿರುವ ೯೫% ಸೇಕಡಾ ಮಂದಿ ಮರಾಟಿಯಂತೆ ಎಂತ ನೋವಿನ ಸಂಗತಿಯಲ್ಲವೇ?
ಕರುನಾಡಿಂದ ಮೀರಜಿಗೆ ಬಹಳ ಕನ್ನಡಿಗರು ಆರೋಗ್ಗೆ ತಪಾಸಣೆಗಾಗಿ ತೆರಳುತ್ತಾರೆ, ಅಲ್ಲಿ ಕನ್ನಡಿಗರನ್ನು ಸರಿಯಾಗಿ ಕಾಣುವುದಿಲ್ಲ.

"ಬೆಳಗಾವಿ" ಇದು ಕೂಡ ಅಪ್ಪಟ ಕನ್ನಡ ಪದ. "ಬೆಳ" ಎಂದರೆ ಬಿಳಿ. ಬೆಳ್ಳಕ್ಕಿ ಪದ ನೋಡಿ. ಬೆಳ್ಳನೆ ಹಕ್ಕಿ = ಬೆಳ್ಳಕ್ಕಿ
ಬೆಳಗೊಳ, ಬೆಳಗಲಿ ಇತರ ಮಾದರಿಗಳು. ಎರಡನೆಯದು "ಗಾವಿ". http://kannadakasturi.com ಇಲ್ಲಿ ಕೊಟ್ಟಿರುವಂತೆ "ಗಾವಿಲ" ಅಂದರೆ ಹಳ್ಳಿಯವ. "ಗಾವಿ" ಎಂದರೆ ಹಳ್ಳಿ. ಹಾಗಾಗಿ 'ಬೆಳಗಾವಿ' ಎಂದರೆ 'ಬಿಳಿಹಳ್ಳಿ'. ಒಂದು ಕಾಲದಲ್ಲಿ ಇದು ಬಿಳಿ ಮಲ್ಲಿಗೆಗೆ ಹೆಸರುವಾಸಿಯಾಗಿದ್ದರಿಂದ ಈ ಹೆಸರು ಬಂದಿರಬೇಕು.
ಇತರ ಮಾದರಿಗಳು ಸೊರಗಾವಿ, ಸಿಗ್ಗಾವಿ.

ಈ ಬಗ್ಗೆ ಇಲ್ಲಿ ಮಾತುಕತೆಯಿದೆ ನೋಡಿ

http://listserv.linguistlist.org/cgi-bin/wa?A2=ind9805&L=indology&D=0&P=7931&F=P

ಅಪ್ಪಟ ಕನ್ನಡ ನಾಡು ಬೆಳಗಾವಿ ಅದು ಎಂದಿದ್ದರೂ ಕರುನಾಡಿಗೆ ಸೇರಬೇಕು.

4 comments:

admin said...

ಹೌದು, ರಾಘವೇಂದ್ರರೇ, ಬೆಳಗಾವಿ ಎಂದಿದ್ದರೂ ಕರುನಾಡಿನದ್ದೇ.

Kesari said...

papu avara lekhana illi odi
oarjuna.blogspot.com

Anonymous said...

ಬೆಳಗಾವಿಯಲ್ಲಿ ಮತ್ತೆ ಕನ್ನಡಕ್ಕೆ ಜಯ

http://karave.blogspot.com/

www.karnatakarakshanavedike.com

Anonymous said...

ಕನ್ನಡ ಮಿತ್ರರೇ,
ನಾಡ ಪರ ಭಾಷಣಗಳು ಇಲ್ಲಿಯವರೆವಿಗು ಎಷ್ಟೊ ಬಂದು ಹೋದವು. ಆದರೆ, ಅದರಲ್ಲಿ ಎಚ್ಚರಿಕೆಯ ಮಾತುಗಳು ಕೆಚ್ಚಿನ ನುಡಿಗಳು ಇಣುಕಿಯೂ ಕೂಡ ಇರಲಿಲ್ಲ.

ಪ್ರತಿ ವರುಷ, ಕನ್ನಡಿಗರಲ್ಲಿ ಜಾಗೃತಿ ಹಾಗೂ ಆತ್ಮಸ್ಥಿರ್ಯ ತುಂಬಲು ಕರ್ನಾಟಕ ರಕ್ಷಣಾ ವೇದಿಕೆಯ ವತಿ ಇಂದ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ನಡೆಯುತ್ತದೆ.

ಕಳೆದ ವರುಷ ಬಳ್ಳಾರಿಯಲ್ಲಿ ಜರುಗಿತು. ಟಿ.ಏ.ನಾರಾಯಣ ಗೌಡರು ಬೆಂಕಿಯ ನುಡಿಗಳ್ಳನ್ನಾಡಿದರು. ವಲಸಿಗರ ಧರ್ಮದ ಬಗ್ಗೆ ತಿಳುವಳಿಕೆ ಹಾಗು ಎಚ್ಚರಿಕೆಯನ್ನು ನೀಡಿದರು.

ಅವರ ಕೆಲವು ನುಡಿ ಗಳು ಹೀಗಿದ್ದವು -

"ನುಡಿ ಕಾಯಿ, ಗಡಿ ಕಾಯಿ, ಇಲ್ಲಿ ಬದುಕ್ತ ಇದ್ದೀಯ, ಬಾಳ್ತ ಇದ್ದಿಯ, ನಮ್ಮ ನಾಡಿನ ಭಾಷೆಯನ್ನ ಕಾಯಿ ನಮ್ಮ ನಾಡಿನ ಜನರ ಹಿತವನ್ನ ಕಾಯಿ, ಈ ನಾಡಿನ ನೆಲ ಜಲಗಳನ್ನ ಕಾಯಿ ಇಲ್ದಿದ್ರೆ ...."



ಮುಂದೆ ಕೇಳಲು ಇಲ್ಲಿ ನೋಡಿ
http://www.karave.blogspot.com/


http://www.karnatakarakshanavedike.org/app/webroot/files/samaavesha_varadi.pdf


೬ ನೇಯ ಸ್ವಾಭಿಮಾನಿ ಕನ್ನಡಿಗರ ಸಮಾವೇಶ,
ಬೆಂಗಳೂರುನಲ್ಲಿ, ಸೆ ೨೮-೨೯ ರಂದು
ಅರಮನೆ ಮೈದಾನ
ತಪ್ಪದೆ ಬನ್ನಿ
ಸ್ವಾಭಿಮಾನಿಗಳಾಗಿ