Thursday, February 20, 2014

ಹೊರಬಾನ ಜೀವಜಗತ್ತನ್ನು ಹೆಕ್ಕಿ ತೆಗೆಯಬಲ್ಲ 'ಜೇಮ್ಸ್ ವೆಬ್' ಗೆಂಟುತೋರ‍್ಪುಗ

೨೦೧೮ ಕ್ಕೆ ಹೊರಬಾನಿಗೆ ಚಿಮ್ಮಲಿರುವ ಜೇಮ್ಸ್ ವೆಬ್, ಹಬ್ಬಲ್ ನ ಸಾಧನೆಗಳನ್ನು ಒಂದು ಹೆಜ್ಜೆ ಮುಂದೆ ಒಯ್ಯಲಿದೆ. ಇದು ಹಬ್ಬಲ್ಗಿಂತ ದೊಡ್ಡ ಕನ್ನಡಿಗಳನ್ನು ಹೊಂದಿದೆ. ಇದು ಭೂಮಿಯನ್ನು ಸುತ್ತುವದಿಲ್ಲ, ಬದಲಾಗಿ ಚಂದ್ರನಿಗಿಂತ ಸುಮಾರು ಮೂರು  ಪಟ್ಟು ದೂರ, ಸೂರ್ಯನ ಸುತ್ತ ಸುತ್ತಲಿದೆ. ಈ ಪುಟ ಹೆಚ್ಚಿನ ಮಾಹಿತಿ ನೀಡುವದು.



 http://www.nasa.gov/externalflash/webb_hubble/

ಬಿಗ್ ಬ್ಯಾಂಗ್ಇಂದ ಮೊದಲಾಗಿ ಸತತವಾಗಿ ಹಿಗ್ಗುತ್ತಿರುವ ಬ್ರಹ್ಮಾಂಡದ ಮುಮ್ಮೊದಲ ಚುಕ್ಕಿಗಳು ಬಲು ದೂರದಲ್ಲಿವೆ, ಅವು ಬಿಲಿಯನ್ ಗಟ್ಟಲೆ ವರುಷಗಳ ಹಿಂದೆ ಇದ್ದ ಸ್ತಿತಿ ನಮಗೆ ಈಗ ತಿಳಿಯುತ್ತದೆ, ಏಕೆಂದರೆ ಅಂದಿಗೆ ಹೊರಟ ಬೆಳಕು ನಮ್ಮನ್ನು ಇಂದು ತಲುಪುತ್ತಿದೆ. ಎಷ್ಟು ದೂರದ ಚುಕ್ಕಿಗಳು ನಮಗೆ ತೋರುತ್ತವೆಯೋ ಅವುಗಳ ಅಸ್ಟು ಹಳೆಯ ಸ್ತಿತಿ ನಮಗೆ ತಿಳಿಯುತ್ತದೆ.

No comments: